ಕೃಷ್ಣಮಠದಲ್ಲಿ ಶಂಕರಾಚಾರ್ಯರಿಗೆ ನಿಂದನೆ: ವ್ಯಾಪಕ ಆಕ್ರೋಶ



ಲೋಕಬಂಧು ನ್ಯೂಸ್ ಉಡುಪಿ, ಜು.13
ಇಲ್ಲಿನ ಶ್ರೀಕೃಷ್ಣಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ಅವಮಾನಿಸಿದ ಘಟನೆ ನಡೆದಿದ್ದು, ಆ ವೀಡಿಯೊ ವೈರಲ್ ಆಗಿದೆ.
ಕಳೆದ ಜು.11ರಂದು ರಾಜಾಂಗಣದಲ್ಲಿ ಮಹಿಳೆಯರೀರ್ವರು ನಡೆಸಿಕೊಡುವ‌ ಕಾರ್ಯಕ್ರಮದಲ್ಲಿ ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ ಜಗದ್ಗುರು ಶ್ರೀ ‌ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಕಟ್ಟುಕಥೆ ಹೇಳಿದ್ದು, ಅದು ಶಾಂಕರ ಅನುಯಾಯಿಗಳು ಹಾಗೂ ಹಿಂದೂ ಪರ ಹೋರಾಟಗಾರರನ್ನು ಕೆರಳಿಸಿದೆ.
ಕಾರ್ಯಕ್ರಮ ಸಂಘಟಕರು ಕ್ಷಮೆ ಕೇಳಬೇಕು ಮತ್ತು ಇಂಥ ಘಟನೆಗಳು ಮುಂದೆ ನಡೆಯದಂತೆ ಎಚ್ಚರವಹಿಸಬೇಕು. ಈ ಬಗ್ಗೆ ಪರ್ಯಾಯ ಶೀರೂರು ಕೃಷ್ಣಮಠ ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ