ಲೋಕಬಂಧು ನ್ಯೂಸ್ ತಿರುಪತಿ, ಜು.7
ಭಕ್ತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಕರ್ನಾಟಕದ ಶತಾಯುಷಿ ನವನೀತಮ್ಮ (116) ಮೆಟ್ಟಿಲುಗಳ ಮೂಲಕ ತಿರುಮಲ ಬೆಟ್ಟ ಏರಿಯೇ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.ಮೆಟ್ಟಿಲು ಹತ್ತಿಯೇ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗಬೇಕೆಂಬುದು ನವನೀತಮ್ಮ ಅವರ ಜೀವಮಾನದ ಕನಸು. ಅದು ಸೋಮವಾರ ಸಾಕಾರಗೊಂಡಿದೆ. ಕುಟುಂಬ ಸದಸ್ಯರ ಜೊತೆ 3,550 ಮೆಟ್ಟಿಲು ಹತ್ತಿಯೇ ತಿರುಮಲ ಬೆಟ್ಟ ಏರಿದರು.
ವಿಷಯ ತಿಳಿದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷರು ನವನೀತಮ್ಮ ಮತ್ತು ಕುಟುಂಬಕ್ಕೆ ವಿಐಪಿ ದರ್ಶನದ ವ್ಯವಸ್ಥೆ ಮಾಡಿದರು. ದರ್ಶನದ ಬಳಿಕ ಅವರಿಗೆ ರೇಷ್ಮೆ ಶಾಲು ಹೊದೆಸಿ, ಪ್ರಸಾದ ನೀಡಿ ಗೌರವಿಸಲಾಯಿತು.