ಲೋಕಬಂಧು ನ್ಯೂಸ್ | ಮಲ್ಪೆ, ಜು.8
ಇಲ್ಲಿನ ಫಿಷರೀಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಗಾಳಿ ಮಳೆಯಿಂದಾಗಿ ಮರ ಬಿದ್ದು ಹಾನಿಗೀಡಾದ ಹಿನ್ನೆಲೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಪ್ರೌಢಶಾಲೆ ವಿಭಾಗದ ರಂಗ ಮಂದಿರಕ್ಕೆ ತಕ್ಷಣ ಸ್ಥಳಾಂತರಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚನೆ ನೀಡಿದರು.
ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲು ಕಂದಾಯ ಇಲಾಖೆ ಮೂಲಕ ನಿವೇಶನ ಗುರುತಿಸಿ, ಅಂಗನವಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಹೇರೂರು, ನಗರಸಭೆ ಮಾಜಿ ಸದಸ್ಯರಾದ ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ ಮತ್ತು ನಾರಾಯಣ ಕುಂದರ್, ಸ್ಥಳೀಯರಾದ ಲಕ್ಷ್ಮೀಶ ಬಂಗೇರ, ವಿನಯ ಕುಮಾರ್, ಸುಶಾಂತ್, ಮಂಜು ಕೊಳ, ಸುರೇಶ್ ಕುಂದರ್, ಕೃಷ್ಣಪ್ಪ ಜತ್ತನ್, ನಿತಿನ್ ಪೂಜಾರಿ, ಸುಧಾಕರ ಕುಂದರ್ ಮತ್ತು ವಿನೋದ್ ಹೊಸಕಟ್ಟ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ಕೋಟ್ಯಾನ್, ಸಹಾಯಕಿ ರೇಣುಕಾ ಮೊದಲಾದವರಿದ್ದರು.
