ಸಂದೀಪ್ ಸಾಲ್ಯಾನ್ ಸಾವು ಪ್ರಕರಣ: ಮಹಿಳೆಯ ಬಂಧನ

ಲೋಕಬಂಧು ನ್ಯೂಸ್ | ಗೋವಾ, ಜು.3
ಮಲ್ಪೆ ನಿವಾಸಿ ಸಂದೀಪ್ ಸಾಲ್ಯಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಮಹಿಳೆಯನ್ನು ಕ್ಯಾಲಂಗುಟ್ ಪೊಲೀಸರು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಮಹಿಳೆ ಮೂಲತಃ ಮಂಗಳೂರು ನಿವಾಸಿ ಅಕ್ಷತಾ ಎಂದು ಗುರುತಿಸಲಾಗಿದೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು.


ಮಹಿಳೆ ರೆಸಾರ್ಟ್'ನಲ್ಲಿ ಕಟ್ಟರ್ ಕೇಳಿ ಸಂದೀಪ್ ಬಳಿ ಇದ್ದ ಚಿನ್ನ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದಳು. ಅದರಿಂದ ಅನುಮಾನಗೊಂಡ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪೊಲೀಸರು ಮಹಿಳೆಯ ವಿಚಾರಣೆ ನಡೆಸುತ್ತಿದ್ದು, ತನಿಖೆಯಿಂದಷ್ಟೇ ಸಂದೀಪ್ ಕೊಲೆಯ ಸತ್ಯಾಂಶ ತಿಳಿದುಬರಬೇಕಿದೆ.