ಲೋಕಬಂಧು ನ್ಯೂಸ್ | ಹಿರಿಯಡಕ, ಜು.13
ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಶ್ರೀದೇವರ ಷಡಾಧಾರ ಪ್ರತಿಷ್ಠೆ ಹಾಗೂ ಆಧಾರಶಿಲೆಯ ಮೇಲೆ ಚಿನ್ನ, ರಜತ ಮತ್ತು ರತ್ನವನ್ನೊಳಗೊಂಡ ಶಿಲಾಕುಂಭ ಸ್ಥಾಪನೆ ಕಾರ್ಯಕ್ರಮ ಭಕ್ತಿಭಾವ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಡಾ.ಸತ್ಯಕೃಷ್ಣ ಭಟ್ ಮಂಗಳೂರು ಅವರ ನೇತೃತ್ವದಲ್ಲಿ ಕನ್ಯಾಲಗ್ನದ ಶುಭ ಮುಹೂರ್ತದಲ್ಲಿ ಷಡಾಧಾರ ಪ್ರತಿಷ್ಠೆ ನೆರವೇರಿಸಲಾಯಿತು.
ಅದಕ್ಕೂ ಮುನ್ನ ದೇವತಾ ಪ್ರಾರ್ಥನೆ, ಪಂಚಗವ್ಯ ಸಹಿತ ಸ್ಥಳಶುದ್ಧಿ, ಪುಣ್ಯಾಹವಾಚನ, ಗಣಹೋಮ ಹಾಗೂ ವಾಸ್ತುಪೂಜೆ ಸೇರಿದಂತೆ ವಿವಿಧ ವೈದಿಕ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ನಡೆದ ನಿಧಿಕುಂಭ ಸ್ಥಾಪನೆ ವೇಳೆ ಅನೇಕ ಭಕ್ತರು ತಮ್ಮ ಭಕ್ತಿ ಸಮರ್ಪಣೆಯ ಸಂಕೇತವಾಗಿ ಬೆಳ್ಳಿ, ಚಿನ್ನ ಹಾಗೂ ಅಮೂಲ್ಯ ರತ್ನಗಳನ್ನು ಸಮರ್ಪಿಸಿ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡಿದರು. ಆಧಾರ ಶಿಲೆಯ ಮೇಲೆ ರಜತ, ರತ್ನ ಹಾಗೂ ಚಿನ್ನವನ್ನು ಒಳಗೊಂಡ ಶಿಲಾಕುಂಭ ಪ್ರತಿಷ್ಠಾಪಿಸಲಾಯಿತು.
ದೇವಾಲಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್ ಬೆಲ್ಪತ್ರೆ, ಖಜಾಂಚಿ ಚಂದ್ರಶೇಖರ್ ನಾಯಕ್, ಶಾಸಕ ಯಶಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಯರಾಜ್ ಹೆಗ್ಡೆ ಮಣಿಪಾಲ, ನಟರಾಜ್ ಹೆಗ್ಡೆ ಹಿರಿಯಡ್ಕ, ಜಯಪ್ರಕಾಶ್ ಹೆಗ್ಡೆ ಶಿವಪುರ, ಪದಾಧಿಕಾರಿಗಳಾದ ಸೀತಾರಾಮ ಭಟ್, ನಿತ್ಯಾನಂದ ನಾಯಕ್, ದೇವಪ್ಪ ನಾಯಕ್, ಶ್ರೀಪತಿ ಭಟ್, ಜಯಪ್ರಕಾಶ್ ಆಚಾರ್ಯ, ಉಮೇಶ್ ಭಟ್, ಕೃಷ್ಣ ನಾಯ್ಕ್ ಸುರೇಂದ್ರ ನಾಯ್ಕ್, ಲಕ್ಷ್ಮಣ್ ನಾಯಕ್, ಪ್ರಕಾಶ್ ಭಟ್, ಉಮೇಶ್ ನಾಯಕ್, ವಿಕ್ರಮ್ ಭಟ್, ಪುನೀತ್ ಆಚಾರ್ಯ, ಗಣೇಶ್ ನಾಯ್ಕ್, ಹರೀಶ್ ನಾಯ್ಕ್, ರಾಜೇಶ್ ನಾಯಕ್, ನಿತೀಶ್ ನಾಯ್ಕ್, ಡಾ.ಕೃಷ್ಣಮೂರ್ತಿ, ದಿನೇಶ್ ಪ್ರಭು, ವಸಂತ್ ನಾಯಕ್, ಸುಂದರ ಮೂಲ್ಯ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದನ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ಕೇಶವ್ ಭಂಡಾರಿ, ಗೋಪಾಲ್ ನಾಯಕ್, ಕೇಶವ್ ನಾಯಕ್, ನಂದಕುಮಾರ್, ಸುರೇಶ್ ಭಟ್, ಮಹಸದೇವ ಭಟ್, ಮುರಳೀಧರ್ ಲಾಗ್ವಂಕರ್, ಪಾಂಡುರಂಗ ಲಗ್ವಂಕರ್, ಮಂದಾರ ಮೋಶೆ, ಶಿಲ್ಪಿ ಕುಪ್ಪುಸ್ವಾಮಿ, ಶ್ರೀಧರ ಭಟ್, ಹರೀಶ್ ಶೆಟ್ಟಿ ,ಮಹೇಶ್ ಭಟ್, ಅಶೋಕ್ ನಾಯಕ್, ಶ್ರೀಧರ ನಾಯ್ಕ ಹರ್ಷಿತ್ ಆಚಾರ್ಯ, ರಮೇಶ್ ನಾಯಕ್ ಕಾಳಬೆಟ್ಟು, ವಾಸುದೇವ ನಾಯಕ್, ಬಾಲಕೃಷ್ಣ ಭಟ್, ಬಾಲಗಂಗಾಧರ್ ಲಾಗ್ವಂಕರ್, ಶ್ರೀಧರ ನಾಯ್ಕ್, ಭಾಸ್ಕರ್ ಕುಲಾಲ್, ಸುಧೀರ್ ಪೂಜಾರಿ, ಮೊದಲಾದರಿದ್ದರು.
.jpg)
.jpg)
.jpg)
.jpg)