ಎಂಜಿಎಂ ಕಾಲೇಜಿನಲ್ಲಿ 'ಖೇಲೋ ಇಂಡಿಯಾ' ಸಂವಾದ

ಲೋಕಬಂಧು ನ್ಯೂಸ್ | ಉಡುಪಿ, ಆ.27
ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಗುರುವಾರ ಆಯೋಜಿಸಿದ ಪ್ರಧಾನಮಂತ್ರಿ  ಖೇಲೋ ಇಂಡಿಯಾ ಸಂವಾದದಲ್ಲಿ ಭಾಗವಹಿಸಿತು.
ಈ ಸಂವಾದಕ್ಕೆ 'ಎ ಕೆಟಗರಿ'ಯಲ್ಲಿ ಆಯ್ಕೆಯಾದ ಉಡುಪಿ ಜಿಲ್ಲೆ ಹಾಗೂ ಮಂಗಳೂರು ವಿ.ವಿ.ಯ ಏಕೈಕ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಎಂಬ ಹೆಗ್ಗಳಿಕೆಗೆ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಪಾತ್ರವಾಗಿದೆ.


ಕಾಲೇಜಿನ ಸುಮಾರು 350 ಮಂದಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಆಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಪ್ರಧಾನಿ ಭಾಷಣದ ತರುವಾಯ ಉಡುಪಿಯ ರಾಷ್ಟ್ರಮಟ್ಟದ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಜೊತೆ ಕಾಲೇಜಿನ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾಲೇಜಿನ ಪರವಾಗಿ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಶಾ ಮುಕ್ತ ಅಭಿಯಾನದ ಪ್ರತಿಜ್ಞೆ ಸ್ವೀಕರಿಸಿದರು.


ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ಎನ್ಎಸ್ಎಸ್ ಅಧಿಕಾರಿಗಳಾದ ಸುಚಿತ್ ಕೋಟ್ಯಾನ್ ಮತ್ತು ಡಾ.ರೇಖಾ ಎನ್.ಚಂದ್ರ, ಉಡುಪಿ ಮೈ ಭಾರತ್ ಕೇಂದ್ರದ ಶ್ಯಾಮಲಾ, ಎನ್ಐಸಿ ಉಡುಪಿಯ ಗೌತಮ್, ಕಾಲೇಜಿನ ಪ್ರಾಧ್ಯಾಪಕರು, ಎನ್ಎಸ್ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು.


ವಿದ್ಯಾರ್ಥಿಗಳಾದ ಅನಘಾ ಮೇಲಾಂಟ, ಪ್ರಾಪ್ತಿ ಶೆಟ್ಟಿ ಹಾಗೂ ದೀಪಕ್ ಹೆಗ್ಡೆ ಸಂವಹನದ ನೇತೃತ್ವ ವಹಿಸಿದ್ದರು.