ಲೋಕಬಂಧು ನ್ಯೂಸ್ | ನವದೆಹಲಿ, ಆ.28
ಇಲ್ಲಿನ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ್ಯ ವ್ರತ ನಿರತರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಶ್ರಾವಣ ಶುಕ್ರವಾರದಂದು ಹಯಗ್ರೀವ ಜಯಂತಿ, ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾಬಂಧನ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ದೆಹಲಿಯ ಸಂಸತ್ ಸದಸ್ಯೆ ಬಾನ್ಸುರಿ ಸ್ವರಾಜ್ (ದಿ. ಸುಷ್ಮಾ ಸ್ವರಾಜ್ ಪುತ್ರಿ), ಶಾಸಕ ಅನಿಲ್ ಶರ್ಮ, ಬಿಜೆಪಿಯ ಈಶಾನ್ಯ ಭಾರತ ಸಂಯೋಜಕ ಉದ್ಯಮಿ ರಾಜ್ ಬಬ್ಬರ್ ಅವರು ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು ಶ್ರೀಪಾದರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ಅನುಗ್ರಹ ಪ್ರಸಾದ ಸ್ವೀಕರಿಸಿದರು.
