ಲೋಕಬಂಧು ನ್ಯೂಸ್ ಉಡುಪಿ, ಆ.13
ಕಾಪು ಪ್ರಖಂಡದ ಬಜರಂಗದಳದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದ ಬಜರಂಗದಳ ಪ್ರಮುಖ ಪುನೀತ್ ಅತ್ತಾವರ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರನ್ನು ಉಡುಪಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವ ಜಿಲ್ಲಾಡಳಿತದ ಕ್ರಮ ಅತ್ಯಂತ ಖಂಡನೀಯ. ಅದನ್ನು ಎಂದು ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್. ತಿಳಿಸಿದ್ದಾರೆ.ದೇಶ ವಿಭಜನೆಯ ಇತಿಹಾಸವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆ ಮುಖಂಡರನ್ನು ನಿರ್ಬಂಧಿಸಿ ಹಿಂದೂಗಳ ಧ್ವನಿ ಅಡಗಿಸಿ ನಮ್ಮನ್ನು ಹಿಂದುತ್ವದ ಕಾರ್ಯದಿಂದ ವಿಮುಖರನ್ನಾಗಿಸುತ್ತೇವೆ ಎನ್ನುವುದು ಮೂರ್ಖತನ. ಇಂಥ ಹಲವು ನಿರ್ಬಂಧ, ನಿಷೇಧಗಳನ್ನು ಎದುರಿಸಿಯೇ ವಿಶ್ವ ಹಿಂದೂ ಪರಿಷತ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ.
ಹಿಂದೂ ವಿರೋಧಿ ಧೋರಣೆಗಳನ್ನು ನಿಲ್ಲಿಸಿ, ವಿಧಿಸಲಾಗಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕು ಎಂದು ಸುನಿಲ್ ಕೆ.ಆರ್. ಆಗ್ರಹಿಸಿದ್ದಾರೆ.