ನೂತನ ಸಚಿವರಿಗೆ ಖಾತೆ ಹಂಚಿಕೆ

ಲೋಕಬಂಧು ನ್ಯೂಸ್ ಬೆಂಗಳೂರು, ಆ.13
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಬುಧವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಖಾತೆಗಳ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಮಾಡಿದ್ದಾರೆ.ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ರಾಮಲಿಂಗ ರೆಡ್ಡಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಈ ಮುಂಚೆ ಮುನಿಯಪ್ಪ ಅವರಿಗೆ ಆಹಾರ ಖಾತೆ ನೀಡಲಾಗಿತ್ತು. ಆದರೆ, ಈ ಬಾರಿ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆ ಬೇಕೆಂದು ಪಟ್ಟುಹಿಡಿದಿದ್ದರು ಮತ್ತು ಖುದ್ದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದರು.


ಯಾರಿಗೆ ಯಾವ ಖಾತೆ?
ಲಕ್ಷ್ಮಣ ಸವದಿ- ಸಹಕಾರ
ರಾಮಲಿಂಗ ರೆಡ್ಡಿ- ಅರಣ್ಯ
ಕೆ.ಎಚ್.ಮುನಿಯಪ್ಪ- ಸಮಾಜ ಕಲ್ಯಾಣ
ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
ಯು.ಟಿ.ಖಾದರ್- ಆರೋಗ್ಯ ಮತ್ತು ಕಲ್ಯಾಣ ಹಾಗೂ ವಕ್ಫ್
ಶಿವರಾಜ್ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ
ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ
ಎಚ್‌.ಸಿ.ಬಾಲಕೃಷ್ಣ- ಪೌರಾಡಳಿತ
ಕೆ.ಎಸ್‌.ಬಸವಂತಪ್ಪ-ಮುಜರಾಯಿ ಹಾಗೂ ಮೀನುಗಾರಿಕೆ
ಎನ್‌.ಚಲುವರಾಯಸ್ವಾಮಿ- ಜಲ ಸಂಪನ್ಮೂಲ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಸ್‌.ಎಸ್‌. ಮಲ್ಲಿಕಾರ್ಜುನ್‌- ಗಣಿ ಮತ್ತು ಭೂವಿಜ್ಞಾನ
ಬಿ.ನಾಗೇಂದ್ರ-ಯೋಜನೆ  ಮತ್ತು ಸಾಂಖ್ಯಿಕ
ಪಿ.ಎಂ.ನರೇಂದ್ರಸ್ವಾಮಿ- ಕೃಷಿ
ಸಿ.ಪುಟ್ಟರಂಗಶೆಟ್ಟಿ- ಪಶು ಸಂಗೋಪನೆ ಹಾಗೂ ರೇಷ್ಮೆ
ಟಿ.ರಘುಮೂರ್ತಿ- ಪರಿಶಿಷ್ಟ ಪಂಗಡ ಕಲ್ಯಾಣ
ರಿಜ್ವಾನ್‌ ಅರ್ಷದ್‌-ಆಹಾರ ಮತ್ತು ನಾಗರಿಕ ಪೂರೈಕೆ
ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ
ಶಿವಲಿಂಗೇಗೌಡ- ಅಬಕಾರಿ
ವಿಜಯಾನಂದ ಕಾಶಪ್ಪನವರ್‌- ಸಣ್ಣ ಕೈಗಾರಿಕೆ
ಜಮೀರ್‌ ಅಹ್ಮದ್‌ ಖಾನ್- ವಸತಿ
ಅಜಯ್ ಸಿಂಗ್- ಸಣ್ಣ ನೀರಾವರಿ, ಐಟಿ-ಬಿಟಿ.