ಲೋಕಬಂಧು ನ್ಯೂಸ್ | ಮಣಿಪಾಲ, ಆ.28
ಇಲ್ಲಿನ ಹುಡ್ಕೊ ಕಾಲನಿಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ವತಿಯಿಂದ ಶ್ರಾವಣ ಹುಣ್ಣಿಮೆ ಶುಕ್ರವಾರದಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ನಡೆಯಿತು.
ರಾಘವೇಂದ್ರ ತಂತ್ರಿ ಹೆರ್ಗ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಮಂದಿ ಮಹಿಳೆಯರು
ಶ್ರದ್ಧಾಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರು.
