ಲೋಕಬಂಧು ನ್ಯೂಸ್ ಮಣಿಪಾಲ, ಸೆ.13
ಇಲ್ಲಿನ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ಮುತ್ತು, ಹವಳಗಳಿಂದ ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಭಾನುವಾರ ಅನಾವರಣಗೊಳಿಸಿದರು.ಈ ಕಲಾಕೃತಿಯಲ್ಲಿ ಸುಮಾರು 5 ಕೆಜಿ ಹವಳ ಮ್ತು ಮುತ್ತಿನಮಣಿ ಬಳಸಲಾಗಿದೆ. 5 ಅಡಿ ಎತ್ತರದ ಈ ಕಲಾಕೃತಿ ರಚನೆಯಲ್ಲಿ ಕಲಾವಿದ ರವಿ ಹಿರೇಬೆಟ್ಟು ಸಹಕರಿಸಿದ್ದಾರೆ.
ಚೌತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ತೆರದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.