ಲೋಕಬಂಧು ನ್ಯೂಸ್ | ಮಣಿಪಾಲ
ಸಾಮಾನ್ಯ ವಿದ್ಯಾರ್ಥಿಗಳನ್ನು ಅಸಾಮಾನ್ಯ ಪ್ರತಿಭೆಗಳನ್ನಾಗಿ ರೂಪಿಸುವಲ್ಲಿ ಎನ್ಎಸ್ಎಸ್ ಸಹಕಾರಿ ಎಂದು ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ ಡಾ.ನಿಕೇತನ ಹೇಳಿದರು.
ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನಲ್ಲಿ ನಡೆದ ಎನ್ಎಸ್ಎಸ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡದರು.
ವಿದ್ಯಾರ್ಥಿಗಳು ಎನ್ಎಸ್ಎಸ್ ಯೋಜನೆಯ ಸದುಪಯೋಗ ಪಡೆದು, ದೇಶದ ಸತ್ಪ್ರಜೆಗಳಾಗಿ ಮೂಡಿಬರುವಂತೆ ಆಶಿಸಿದರು.
ಎನ್ಎಸ್ಎಸ್ ದಿನದ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಪೂರ್ವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮತ್ತು ಕಾಲೇಜಿನ ಉಪ ಪ್ರಾಂಶುಪಾಲ ರವಿ ಜಿ. ಸ್ವಾಗತಿಸಿದರು. ಸ್ವಯಂ ಸೇವಕಿಯರು ಎನ್ಎಸ್ಎಸ್ ಗೀತೆ ಹಾಡಿದರು. ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು.