ಕೃಷ್ಣ ಮಠದಲ್ಲಿದ್ದ ಪಂಚಮುಖಿ ಹನುಮ ವಿಗ್ರಹ ಸ್ಥಳಾಂತರ

ಲೋಕಬಂಧು ನ್ಯೂಸ್ | ಉಡುಪಿ, ಸೆ.11
ಶ್ರೀಕೃಷ್ಣ ಮಠದ ಪರಿಸರದಲ್ಲಿದ್ದ ಪಂಚಮುಖಿ ಹನುಮಂತನ ವಿಗ್ರಹವನ್ನು ಶೀರೂರು ಮೂಲಮಠಕ್ಕೆ ಸ್ಥಳಾಂತರಿಸಲಾಗಿದೆ.
ಈ ವಿಗ್ರಹವನ್ನು ಹಿಂದಿನ ಶೀರೂರು ಪರ್ಯಾಯದಲ್ಲಿ ಲಕ್ಷ್ಮೀವರತೀರ್ಥ ಸ್ವಾಮೀಜಿ ಇರಿಸಿದ್ದರು. ಅದಕ್ಕೆ ಪ್ರಾಣ ಪ್ರತಿಷ್ಠೆ ಮೊದಲಾದ ಯಾವುದೇ ಪ್ರತಿಷ್ಠಾಪನ ವಿಧಿಗಳು, ಪೂಜೆ ಇರಲಿಲ್ಲ ಎಂದು ಪರ್ಯಾಯ ಶೀರೂರು ಮಠದ ಪ್ರಕಟಣೆ ತಿಳಿಸಿದೆ.