ಲೋಕಬಂಧು ನ್ಯೂಸ್ ಉಡುಪಿ, ಸೆ.21
ಕಲ್ಯಾಣಪುರ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವಿದೇಶಿ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕಾರ್ಯಾಚರಣೆಗೆ 112 ತುರ್ತು ಸಹಾಯವಾಣಿ ಪೊಲೀಸರು ನೆರವು ನೀಡಿದರು.
ಆಸ್ಪತ್ರೆಗೆ ದಾಖಲಿಸಲಾದ ವ್ಯಕ್ತಿ ರಷ್ಯಾ ದೇಶದ ಪ್ರಜೆಯಾಗಿದ್ದು, ಭಾರತದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರೆಂದು ತಿಳಿದುಬಂದಿದೆ. ಅವರು ವಿದೇಶಿ ಪ್ರಜೆಯಾಗಿರುವ ಹಿನ್ನೆಲೆಯಲ್ಲಿ ನಿತ್ಯಾನಂದ ಒಳಕಾಡು ಅವರು ಘಟನೆಯ ವಿವರವನ್ನು ನಗರ ಪೊಲೀಸ್ ಠಾಣೆಗೆ ಮೌಖಿಕವಾಗಿ ತಿಳಿಸಿದ್ದಾರೆ.