ಲೋಕಬಂಧು ನ್ಯೂಸ್ | ಬೆಳ್ತಂಗಡಿ
ಪಾಡಿ ನಿವಾಸಿ ವಿನೋದ್ ಎಂಬವರ ಕೃಷಿ ತೋಟದ ಕಣಿಯ ಬಳಿ ಸೋಮವಾರ ಸಂಜೆ ಅಸ್ಥಿಪಂಜರ ಪತ್ತೆಯಾಗಿದ್ದು ತೋಟವನ್ನು ಮೆಷಿನ್ ಮೂಲಕ ಸ್ವಚ್ಛಗೊಳಿಸುತ್ತಿದ್ದ ವೇಳೆ ತಲೆಬುರುಡೆ ಸೇರಿದಂತೆ ವಿವಿಧ ಎಲುಬುಗಳು ಹಾಗೂ ಬಟ್ಟೆಯ ಅವಶೇಷಗಳು ಕಂಡುಬಂದಿವೆ.
ತೋಟ ನೋಡಿಕೊಳ್ಳುತ್ತಿದ್ದ ಸುರೇಶ್ ಅವರು ಅಸ್ಥಿಪಂಜರ ಕಂಡುಬಂದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ವೇಣೂರು ಠಾಣೆ ಪೊಲೀಸರು ಹಾಗೂ ಎಸ್‌ಒಸಿಒ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಸ್ಥಿಪಂಜರ ಯಾರದ್ದೆಂದು ತಿಳಿದುಬಂದಿಲ್ಲ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಅಸ್ಥಿಪಂಜರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸುವ ಸಾಧ್ಯತೆಯಿದೆ.
