ಲೋಕಬಂಧು ನ್ಯೂಸ್ | ಉಡುಪಿ
ಕರಾವಳಿ ಜನರ ದೀರ್ಘಕಾಲದ ಬೇಡಿಕೆಯಾದ ವಂದೇ ಭಾರತ್ ರೈಲನ್ನು ಬೆಂಗಳೂರು- ಮಂಗಳೂರು- ಉಡುಪಿ- ಕುಂದಾಪುರ ಮಾರ್ಗವಾಗಿ ಕಾರವಾರ- ಮಡಗಾಂವ್ ವರೆಗೆ ಓಡಿಸಲು ಅವಕಾಶ ನೀಡಿ ಕರಾವಳಿ ಜಿಲ್ಲೆಗಳ ಜನತೆಯನ್ನು ವಂದೇ ಭಾರತ್ ಮೂಲಕ ರಾಜಧಾನಿ ಬೆಂಗಳೂರಿಗೆ ಜೋಡಿಸಲು ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿ.ಸೋಮಣ್ಣ ಅವರಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ಕರಾವಳಿ ಜನತೆಗೆ ಅತ್ಯುತ್ತಮ ರೈಲ್ವೆ ಸೇವೆ ಒದಗಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಸಂಸದರಾದ ಬೃಜೇಶ್ ಚೌಟ ಹಾಗೂ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರಿಗೂ ಅಭಿನಂದನೆ ಹೇಳಿದ್ದಾರೆ.
