ಕಟೀಲು ದೇವಳದಲ್ಲಿ ಭಕ್ತರಿಗೆ ಸೇಬು ವಿತರಣೆ

ಲೋಕಬಂಧು ನ್ಯೂಸ್ ಕಟೀಲು
ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಬಂದ ಐದು ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಸೇಬು ಹಣ್ಣುಗಳನ್ನು ಪ್ರಸಾದ ರೂಪವಾಗಿ ಮಂಗಳವಾರ ವಿತರಿಸಲಾಯಿತು.ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಯು. ಮಲ್ಲಿಕಾರ್ಜುನ ಬೆಂಗಳೂರು ಅವರು ದೇವರಿಗೆ ಸಮರ್ಪಿಸಿದ ಸೇಬು ಹಣ್ಣುಗಳನ್ನು
ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ ಮತ್ತು ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರು ಭಕ್ತರಿಗೆ ವಿತರಿಸಿದರು.


ಕಳೆದ ವಾರವೂ ಐದು ಸಾವಿರ ಸೇಬು ಮತ್ತು ಕಿತ್ತಳೆ ಹಣ್ಣುಗಳನ್ನು ಮಲ್ಲಿಕಾರ್ಜುನ ಅವರು
ಕಟೀಲು ದೇವಿಗೆ ಸಮರ್ಪಿಸಿದ್ದರು.


5 ಲಕ್ಷ ಕಾಣಿಕೆ
ನವರಾತ್ರಿಯ ಲಲಿತಾಪಂಚಮಿ ದಿನ ಭಕ್ತರಿಗೆ
ಶೇಷವಸ್ತ್ರ ವಿತರಣೆಗೆ ಐದು ಲಕ್ಷ ರೂ. ಕಾಣಿಕೆಯಾಗಿ ಅವರು ನೀಡಿದ್ದಾರೆ.