ಲೋಕಬಂಧು ನ್ಯೂಸ್ | ಮೂಡುಬಿದಿರೆ
ಪಡುಮಾರ್ನಾಡು ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ನೀಡುವ ‘ಬನ್ನಡ್ಕ ಶ್ರೀ ಶಾರದಾರತ್ನ’ ಪ್ರಶಸ್ತಿಗೆ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ದೇಶ- ವಿದೇಶಗಳಲ್ಲಿ ಖ್ಯಾತಿಯಾಗಿರುವ ಎಸ್. ಕೆ.ಎಫ್. ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ರಾಮಕೃಷ್ಣ ಆಚಾರ್ ಅವರು ಶ್ರೇಷ್ಠ ಸಾಧಕರಾಗಿದ್ದಾರೆ.
ಕಡಿಮೆ ಬಂಡವಾಳದಲ್ಲಿ ಬನ್ನಡ್ಕದಲ್ಲಿ ಎಸ್.ಕೆ.ಎಫ್. ಸಂಸ್ಥೆಯನ್ನು ಆರಂಭಿಸಿ ಹಲವಾರು ಮಂದಿಗೆ ಕೈಗಾರಿಕಾ ತರಬೇತಿ, ಉದ್ಯೋಗ ನೀಡಿದ್ದಾರೆ. 1993ರಲ್ಲಿ ಎಸ್.ಕೆ.ಎಫ್. ಬಾಯ್ಲರ್ಸ್ ಆ್ಯಂಡ್ ಡ್ರೈಯರ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಕಠಿಣ ಪರಿಶ್ರಮದ ಮೂಲಕ ಸಂಸ್ಥೆಯನ್ನು ಉತ್ತಂಗಕ್ಕೇರಿಸಿದ್ದಾರೆ.
ಹೆಬ್ರಿ ಸಮೀಪದ ಮುನಿಯಾಲಿನಲ್ಲಿ ಗೋಧಾಮದ ಮೂಲಕ ದೇಸಿ ಗೋರಕ್ಷಣೆ ಜೊತೆಗೆ ಕೃಷಿಗೆ ಆದ್ಯತೆ ನೀಡಿ ಶ್ರಮಿಸುತ್ತಿದ್ದಾರೆ.
ಅವರ ಈ ಎಲ್ಲಾ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
