ಲೋಕಬಂಧು ನ್ಯೂಸ್ | ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಬುಧವಾರ ಭೇಟಿ ನೀಡಿದರು.
ಶ್ರೀ ಶಾರದಾಪರಮೇಶ್ವರಿಯ ದರ್ಶನ ಪಡೆದ ಶ್ರೀಪಾದರು ನರಸಿಂಹವನದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿಯರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು.
ಜಗದ್ಗುರುಗಳು ಕಾಣಿಯೂರು ಶ್ರೀಗಳನ್ನು ಗೌರವಿಸಿದರು.
ಶೃಂಗೇರಿ ಶ್ರೀಮಠದ ಶ್ರೀಮಠದ ಕೃಷ್ಣಮೂರ್ತಿ ಮತ್ತು ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಇದ್ದರು.

.jpg)