ಐದು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಶೇಷವಸ್ತ್ರ ವಿತರಣೆ

ಲೋಕಬಂಧು ನ್ಯೂಸ್ | ಪಡುಬಿದ್ರಿ
ಸುಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಲ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಗುರುವಾರ ಲಲಿತಾ ಪಂಚಮಿಯಂದು ವಿಶೇಷ ಸಾಮೂಹಿಕ ಕುಂಕುಮಾರ್ಚನೆ ಸೇವೆಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದು, ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ. ಶಂಕ‌ರ್ ನೇತೃತ್ವದಲ್ಲಿ ಶೇಷವಸ್ತ್ರ (ಸೀರೆ) ವಿತರಿಸಲಾಯಿತು.
ಡಾ.ಜಿ. ಶಂಕರ್ ಪತ್ನಿ ಶಾಲಿನಿ ಜಿ. ಶಂಕರ್, ಪುತ್ರಿ ಶ್ಯಾಮಿಲಿ ನವೀನ್ ಪೂಜಾ ಸಂಕಲ್ಪದಲ್ಲಿ ಪಾಲ್ಗೊಂಡಿದ್ದರು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಕಾರ್ಯದರ್ಶಿ ಸತೀಶ್ ಕುಂದರ್‌ ಮಲ್ಪೆ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಮಹಾಜನ ಸಂಘದ ಮಹಿಳಾ ಅಧ್ಯಕ್ಷೆ ಕವಿತಾ ಶರತ್, ನಾಲ್ಕುಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಉದಯ್ ಕುಮಾರ್ ಹಟ್ಟಿಯಂಗಡಿ, ಸತೀಶ್ ಅಮೀನ್ ಬಾರ್ಕೂರು, ಚೇತನ್ ಬೇಂಗ್ರೆ ಮೊದಲಾದವರಿದ್ದರು.