ಲೋಕಬಂಧು ನ್ಯೂಸ್ ಮಲ್ಪೆ
ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗೂ ಪುತ್ತೂರು ವಾದಿರಾಜ ತಂತ್ರಿ ಭಾನುವಾರ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸದಸ್ಯರಾದ ಯಶೋಧರ್ ಸಾಲ್ಯಾನ್, ರಾಜ ಎ. ಸೇರಿಗಾರ ಮತ್ತು ವಾದಿರಾಜ ಸಾಲ್ಯಾನ್, ಪವಿತ್ರಪಾಣಿ ಜನಾರ್ದನ ಕೊಡವೂರು, ದೇವಳದ ಉಮೇಶ್ ರಾವ್, ವಾಸುದೇವ ಉಪಾಧ್ಯ, ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.