ಲೋಕಬಂಧು ನ್ಯೂಸ್ ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ವೈಭವದ ಉಡುಪಿ ಉಚ್ಚಿಲ ದಸರಾದ 7ನೇ ದಿನವಾದ ಶನಿವಾರ ಉಡುಪಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಮೋಘವಾದ 'ಕಿನ್ನಿ ಪಿಲಿ ನಲಿಕೆ' ಮತ್ತು ಬೆರಗಿನ 'ಪೊಣ್ಣು' ಪಿಲಿ ನಲಿಕೆ' ಸ್ಪರ್ಧೆ ಮಹೋತ್ಸವದ ಉತ್ಸಾಹವನ್ನು ಹೆಚ್ಚಿಸಿದವು.
ಸ್ಪರ್ಧೆಗೆ ಚಾಲನೆ ನೀಡಿದ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್, ದಸರೆ ಮಹಿಳೆಯರ ಹಬ್ಬ. ಅದರಂತೆ ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ 'ಪೊಣ್ಣು ಪಿಲಿ ನಲಿಕೆ' ಸ್ಪರ್ಧೆ ನಡೆಸಲಾಗುತ್ತಿದೆ. ಅದಕ್ಕೆ ಕಾರಣರಾದ ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ ಈ ಸ್ಪರ್ಧೆಯ ಮೂಲಕ ಉಚ್ಚಿಲ ದಸರಾಗೆ ಇನ್ನಷ್ಟು ಮೆರುಗು ತುಂಬಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ, ಈ ಹಿಂದಿನ ವರ್ಷಗಳಲ್ಲಿ 'ಪೊಣ್ಣು ಪಿಲಿ ನಲಿಕೆ' ಸ್ಪರ್ಧೆ ನಡೆಸಲಾಗಿತ್ತು, ಈ ಬಾರಿ ಬಾಲ್ಯದಲ್ಲಿಯೇ ಮಕ್ಕಳಿಗೆ ತುಳುನಾಡಿನ ಎಲ್ಲಾ ಉತ್ಸವಾದಿಗಳ ಅವಿಭಾಜ್ಯ ಅಂಗವಾಗಿರುವ ಹುಲಿವೇಷದ ಪರಿಚಯ ಮಾಡಿಸಲು ಮತ್ತು ಅವರಲ್ಲಿ ನಮ್ಮ ಸಂಸ್ಕೃತಿಯ ಜಾಗೃತಿ ಮೂಡಿಸುವುದಕ್ಕಾಗಿ 'ಕಿನ್ನಿ ಪಿಲಿ ನಲಿಕೆ' ಸ್ಪರ್ಧೆ ನಡೆಸಲಾಗುತ್ತಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘದ ಮುಂಬೈ ಶಾಖೆ ಗೌರವಾಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಶಾಲಿನಿ ಜಿ. ಶಂಕರ್, ಶಾಮಿಲಿ ನವೀನ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗಣ್ಯರಾದ ಶೇಖರ್ ಸಾಲ್ಯಾನ್, ಖುಷಿ ಶೆಟ್ಟಿ, ಸುಷ್ಮಾ ಬಂಟ್ವಾಳ, ಲಕ್ಷ್ಮೀ ಶೆಣೈ, ಶಿಲ್ಪಾ ಜಿ. ಸುವರ್ಣ, ವಿನಯ್ ಕರ್ಕೇರ, ವಾಸುದೇವ ಸಾಲ್ಯಾನ್, ಗುಂಡು ಬಿ.ಅಮೀನ್, ಯುವರಾಜ್ ಸಾಲ್ಯಾನ್ ಮಸ್ಕತ್, ಸುಗುಣ ಕರ್ಕೇರ, ಶಶಿಕಾಂತ್ ಪಡುಬಿದ್ರಿ, ಶರಣ್ ಕುಮಾರ್ ಮಟ್ಟು, ಯಜ್ಞೇಶ್ ಕರ್ಕೇರ, ದಿನೇಶ್ ಎರ್ಮಾಳು, ಲೀಲಾಧರ ಮಸ್ಕತ್ ಮೊದಲಾದವರಿದ್ದರು.
ಬಹುಮಾನಿತರು
ಪೊಣ್ಣು ಪಿಲಿ ನಲಿಕೆ ತಂಡ- ಪ್ರಥಮ: ದರ್ಪಣ ಉಡುಪಿ, ದ್ವಿತೀಯ: ಡಿಡಿ ಗ್ರೂಪ್ ನಿಟ್ಟೂರು, ತೃತೀಯ: ಕಿಡ್ಸ್ ಟೀಂ ಮಲ್ಪೆ, ಚತುರ್ಥ: ಫ್ರೆಂಡ್ಸ್ ಟೀಂ ಮಲ್ಪೆ
ವೈಯಕ್ತಿಕ ವಿಭಾಗ- ಪ್ರಥಮ: ಪೂರ್ವಾ ರಾಜೇಶ್ ಮಲ್ಪೆ, ದ್ವಿತೀಯ: ಸೌಮ್ಯ ಸುರೇಂದ್ರ ಸುರತ್ಕಲ್, ತೃತೀಯ: ರಮ್ಯಾ ರೂಪೇಶ್ ನಿಟ್ಟೂರು, ಚತುರ್ಥ: ನಿಮಿತ್ತ.
ಕಿನ್ನಿಪಿಲಿ ನಲಿಕೆ: 0-2 ವರ್ಷ ವಿಭಾಗ- ಪ್ರಥಮ: ವಿಹ ಪಿ. ಸುವರ್ಣ, ದ್ವಿತೀಯ: ಸುಶನ್ಯ ಎಸ್. ಕಟಪಾಡಿ, ತೃತೀಯ: ಪಾರ್ಥವ್ ಸುವರ್ಣ ಎಸ್.
2-4 ವರ್ಷ ವಿಭಾಗ: ಪ್ರಥಮ- ಚಕಿತ್ ವಿ. ಎಕ್ಕಾರ್, ದ್ವಿತೀಯ: ಶಿವಿನ್ ನಿಖಿಲ್, ತೃತೀಯ: ಆದಿತ್ಯ ಕೃಷ್ಣ ಉಪಾಧ್ಯ
4-6 ವರ್ಷ ವಿಭಾಗ- ಪ್ರಥಮ: ಮಿಷ್, ದ್ವಿತೀಯ: ಅದ್ವೈತ್ ಕೋಟ್ಯಾನ್, ತೃತೀಯ: ಪ್ರಿಯಾಂಶ್.
6-8 ವರ್ಷ ವಿಭಾಗ- ಪ್ರಥಮ: ಶ್ರೀಶೈಲ, ದ್ವಿತೀಯ: ಶಾಸ್ತ್ರ ಜಿ. ಸಾಲ್ಯಾನ್, ತೃತೀಯ: ಶ್ರೀಹಾನ್ ಕೆ. ಬಂಗೇರ ಮತ್ತು ದೇಶನ್ವಿ ಕೆ. ಸಾಲ್ಯಾನ್.