ಉಚ್ಚಿಲ ದಸರಾ: ಗಮನ‌ಸೆಳೆದ ರಂಗೋಲಿ ಸ್ಪರ್ಧೆ

ಲೋಕಬಂಧು ನ್ಯೂಸ್ | ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಬಗೆಯ ಆಕರ್ಷಕ ರಂಗೋಲಿ  ರಚಿಸುವ ಮೂಲಕ ಸ್ಪರ್ಧಿಗಳು ನೋಡುಗರ ಗಮನ ಸೆಳೆದರು.
ಬಣ್ಣ ಬಣ್ಣದ ಚಿತ್ತಾರ ಹಾಗೂ ಕಲಾತ್ಮಕ ವಿನ್ಯಾಸಗಳ ರಂಗೋಲಿ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡವರು ತಮ್ಮ ಸೃಜನಶೀಲತೆ ಮತ್ತು ಕಲಾಪ್ರತಿಭೆ ಅನಾವರಣಗೊಳಿಸಿದರು.


ಮಹಿಳೆಯರ ವಿಭಾಗದಲ್ಲಿ ತ್ರಿಶಾ ವಿ. ಆಚಾರ್ಯ ನಂದಿಕೂರು (ಪ್ರಥಮ), ಹೇಮಾವತಿ ಮಣಿಪಾಲ (ದ್ವಿತೀಯ) ಮತ್ತು ಗೀತಾ ಎಂ. ಶೇಟ್ ಕುಂದಾಪುರ (ತೃತೀಯ) ಹಾಗೂ ಸಮಾಧಾನಕರ: ವೈಷ್ಣವಿ ವಿ. ಆಚಾರ್ಯ ಮಣಿಪಾಲ ಬಹುಮಾನ ಪಡೆದರು.


ಪುರುಷರ ವಿಭಾಗದಲ್ಲಿ ವಿಶ್ವೇಶ್‌ ಮಣಿಪಾಲ (ಪ್ರಥಮ), ಶಿವರಾಜ್ ಪೂಜಾರಿ ಸೂಡ (ದ್ವಿತೀಯ) ಮತ್ತು ಪ್ರಣವ್ ಟಿ. ಪುತ್ರನ್ ಎರ್ಮಾಳು ಬಡಾ (ತೃತೀಯ) ಹಾಗೂ ಸಮಾಧಾನಕರ ತಿಲಕ್ ಡಿ. ಪುತ್ರನ್ ಎರ್ಮಾಳು ಬಡಾ ಬಹುಮಾನ ಪಡೆದರು.


ರಮೇಶ್ ಕಿದಿಯೂರು, ಶೇಖ‌ರ್ ,ಕಲಾಪ್ರತಿಭಾ, ಶ್ರೀಧರ ತೊಟ್ಟಂ ತೀರ್ಪುಗಾರರಾಗಿದ್ದರು.


ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಚೇತನ್ ಬೇಂಗ್ರೆ, ನಾರಾಯಣ, ಗಂಗಾಧರ ಕಿದಿಯೂರು, ಶೇಖ‌ರ್ ಇದ್ದರು.


ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್ ಮಹಾಜನ ಸಂಘದ‌ ಮಹಿಳಾ ಅಧ್ಯಕ್ಷೆ ಕವಿತಾ ಶರತ್, ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜಂಟಿ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘದ ಅಧ್ಯಕ್ಷೆ ಸುಗುಣ ಕರ್ಕೇರ, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.