ಲೋಕಬಂಧು ನ್ಯೂಸ್ | ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಆರನೆಯ ದಿನವಾದ ಶುಕ್ರವಾರ ಮೂಲಾನಕ್ಷತ್ರದಂದು ಶ್ರೀ ಶಾರದಾಂಬೆಗೆ ವೀಣಾಪಾಣಿ ಅಲಂಕಾರ ಮಾಡಲಾಗಿತ್ತು.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವಿಶೇಷ ಪೂಜೆ ನೆರವೇರಿಸಿದರು.
