ಲೋಕಬಂಧು ನ್ಯೂಸ್ | ಬ್ರಹ್ಮಾವರ
ಬಾರಕೂರಿನಲ್ಲಿರುವ ಭಂಡಾರಕೇರಿ ಮೂಲ ಮಠದಲ್ಲಿ ಕಾರ್ತಿಕ ಹುಣ್ಣಿಮೆಯಂದು ಪ್ರಕೃತಿ ಉಪಾಸನೆ ಅಂಗವಾಗಿ ಲೋಕಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಧಾತ್ರಿಹವನ, ಧಾತ್ರೀಪೂಜಾ ಉತ್ಸವ ಬುಧವಾರ ನೆರವೇರಿತು.
ಕರಾವಳಿ ಪ್ರದೇಶದಲ್ಲಿ ಅಪೂರ್ವವಾಗಿ ನಡೆಯುವ ಧಾತ್ರಿಪೂಜೆ ಭಂಡಾರಕೇರಿ ಮಠದಲ್ಲಿ ಪ್ರತೀವರ್ಷ ನಡೆಯುತ್ತಿದ್ದು, ಪುರಾತನ ನೆಲ್ಲಿ ವೃಕ್ಷದಡಿಯಲ್ಲಿ ಈ ಧಾರ್ಮಿಕ ಉತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದರು.
.jpg)
.jpg)
.jpg)