ಲೋಕಬಂಧು ನ್ಯೂಸ್ ಉಡುಪಿ
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಘಟಕ ವತಿಯಿಂದ ಬುಧವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆ ಅವರ ಹುಟ್ಟುಹಬ್ಬವನ್ನು 'ಸೇವಾದಿನ' ಎಂಬುದಾಗಿ ಆಚರಿಸಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರದ ಮೂಲಕ ಅನ್ನದಾನ, ವಿದ್ಯಾದಾನ, ವಸ್ತ್ರದಾನ ಹಾಗೂ ಔಷಧ ದಾನಗಳೆಂಬ ಚತುರ್ದಾನಗಳ ಜೊತೆಗೆ ಅಭಯ ದಾನವನ್ನೂ ನೀಡುತ್ತಿರುವ ಹೆಗ್ಗಡೆಯವರ ಸಾಮಾಜಿಕ ಮತ್ತು ಸೇವಾ ಚಟುವಟಿಕೆಗಳು ಜಾಗತಿಕ ಮಾನ್ಯತೆ ಪಡೆದು ಮದರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಯೋಜನೆಯ ನಿರ್ದೇಶಕ ನಾಗರಾಜ ಶೆಟ್ಟಿ, ಯೋಜನಾಧಿಕಾರಿ (ಆಡಳಿತ) ಅಮರಪ್ರಸಾದ್, ಜಿಲ್ಲಾ ಯೋಜನಾಧಿಕಾರಿ ಸ್ವಪ್ನ, ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ತರಬೇತಿ ಸಂಸ್ಥೆ ಪ್ರಾಂಶುಪಾಲೆ ಅನಿತಾ ಶೆಟ್ಟಿ ಮೊದಲಾದವರಿದ್ದರು.
ಆಸ್ಪತ್ರೆಯ ಒಳರೋಗಿಗಳ ಜೊತೆಗಿರುವ ಮನೆಯ ಸದಸ್ಯರಿಗೆ ಉಪಾಹಾರ ಹಾಗೂ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸುಮಾರು 200 ಮಂದಿಗೆ ವಿತರಿಸಲಾಯಿತು.