ಧರ್ಮಸ್ಥಳಕ್ಕೆ ಬಗ್ಗಿ ಕಾರು ಕೊಡುಗೆ

ಲೋಕಬಂಧು ನ್ಯೂಸ್ ಉಜಿರೆ

ಶ್ರೀಕ್ಷೇತ್ರ ಧರ್ಮಸ್ಥಳದ ಅಭಿಮಾನಿ ಹಾಗೂ ಭಕ್ತರಾದ ಹಿರಿಯ ಉದ್ಯಮಿ ಬಸವರಾಜ್‌ ಆರ್‌. ಹತ್ತು ಸೀಟುಗಳುಳ್ಳ 'ಬಗ್ಗಿ' (ಇ.ವಿ.) ಕಾರನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಿದ್ದಾರೆ.ಅದನ್ನು ವಿಶೇಷಚೇತನರಿಗೆ ವಸತಿಗೃಹಕ್ಕೆ ಹೋಗಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ತಿಳಿಸಿದ್ದಾರೆ.