ಸಂವಿಧಾನದ ರಕ್ಷಣೆಗೆ ಜನಜಾಗೃತಿ ಅಗತ್ಯ

ಲೋಕಬಂಧು ನ್ಯೂಸ್ ಉಡುಪಿ
ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಚಿಂತಕ ಪ್ರೊ.ಫಣಿರಾಜ್ ಕರೆ ನೀಡಿದರು.ಸಹಬಾಳ್ವೆ ಉಡುಪಿ, ಸಾಲಿಡಾರಿಟಿ ಯೂತ್ ಮೂವ್'ಮೆಂಟ್ ಉಡುಪಿ ಜಿಲ್ಲೆ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಎಸ್‌ಐಆರ್ ಪ್ರಕ್ರಿಯೆ‌ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿದ ಅವರು, ಸಂವಿಧಾನದ ರಕ್ಷಣೆಗೆ ಜನಸಾಮಾನ್ಯರು ಸಂಘಟಿತವಾಗಿ ಧ್ವನಿ ಎತ್ತಬೇಕಾಗಿದೆ ಎಂದರು.


ಸಂಸತ್ತಿನಲ್ಲಿ ಕಾಯಿದೆಗಳ ಅಂಗೀಕಾರ ಪ್ರಕ್ರಿಯೆ, ಜಂಟಿ ಸಂಸದೀಯ ಸಮಿತಿಯ ಪಾತ್ರ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಮಾತನಾಡಿದ ಅವರು, ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.


ಬಾಬರಿ ಮಸೀದಿ ಧ್ವಂಸ ಹಾಗೂ ಬಿಲ್ಕೀಸ್ ಬಾನು ಪ್ರಕರಣಗಳನ್ನೂ ಪ್ರಸ್ತಾಪಿಸಿ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಪ್ರೊ. ಮೋಹನ್ ಕುಮಾರ್, ಇದ್ರಿಸ್ ಹೂಡೆ, ನಿಹಾಲ್ ಕಿದಿಯೂರು ಮಾತ‌ನಾಡಿದರು.


ಈ ಸಂದರ್ಭದಲ್ಲಿ ನಾಗೇಶ್ ಉದ್ಯಾವರ, ನಿಸಾರ್ ಉಡುಪಿ, ಮುಹಮ್ಮದ್ ಮೌಲಾ, ಚಾರ್ಲ್ಸ್ ಅಂಬ್ಲೇರ್, ರಫೀಕ್ ಕುಂದಾಪುರ, ರಿಯಾಝ್ ಕೋಡಿ, ಶಾರದ, ಕುಲ್ಸುಮ್ ಅಬೂಬಕ್ಕರ್, ಅಬ್ದುಲ್ ಅಝೀಜ್ ಉದ್ಯಾವರ, ಸಾಲಿಡಾರಿಟಿಯ ಅಫ್ವಾನ್ ಬಿ. ಹೂಡೆ, ಜೌಹರ್ ಹೂಡೆ, ಮುಸ್ತಾಕ್ ಖತೀಬ್, ನಿಫಾಲ್ ಕಿದಿಯೂರು, ಇಕ್ಬಾಲ್ ಮನ್ನಾ, ಇಸ್ಮಾಯಿಲ್ ಕಟಪಾಡಿ ಮೊದಲಾದವರಿದ್ದರು.


ಯಾಸೀನ್ ಕೋಡಿಬೆಂಗ್ರೆ ನಿರೂಪಿಸಿ, ವಂದಿಸಿದರು.