ಸದಾಶಿವ ಪ್ರಭು ಅಧಿಕಾರ ಸ್ವೀಕಾರ

ಲೋಕಬಂಧು ನ್ಯೂಸ್ ಉಡುಪಿ
ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವ ಬಿ.ಸದಾಶಿವ ಪ್ರಭು ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.ಕಳೆದ ಮೇ 31ರಂದು ಸೇವಾ ನಿವೃತ್ತರಾಗಿದ್ದ ಅವರನ್ನು ಕರ್ನಾಟಕ ಸರಕಾರ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಸದಸ್ಯರನ್ನಾಗಿ ನೇಮಿಸಿದೆ.


ಉಡುಪಿ ಜಿಲ್ಲೆಯ ಎಳ್ಳಾರೆಯವರಾದ ಅವರು, ಈ ಹಿಂದೆ ಕುಂದಾಪುರದ ಉಪವಿಭಾಗಾಧಿಕಾರಿಯಾಗಿ, ಕೋವಿಡ್ ಅವಧಿಯಲ್ಲಿ ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಸೇವೆ ಸಲ್ಲಿಸಿದ್ದರು.