ಹಿರಿಯ ಧರ್ಮಗುರು ವಂ.ಚಾರ್ಲ್ಸ್ ಲೂವಿಸ್ ನಿಧನ

ಲೋಕಬಂಧು ನ್ಯೂಸ್ ಉಡುಪಿ
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ.ಚಾರ್ಲ್ಸ್ ಲೂವಿಸ್ ಗುರುವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.ಕುಂದಾಪುರದ ಪಡುಕೋಣೆಯಲ್ಲಿ 1945ರ ನ.23ರಂದು ಜನಿಸಿದ ಅವರು 1971ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದರು. 1971ರಿಂದ 1972ರ ವರೆಗೆ ಬಜ್ಪೆಯಲ್ಲಿ ಹಾಗೂ 1972ರಿಂದ 1973ರ ವರೆಗೆ ಪುತ್ತೂರಿನಲ್ಲಿ ಸಹಾಯಕ
ಧರ್ಮಗುರುಗಳಾಗಿ, ಬಳಿಕ 1973ರಿಂದ 1974ರ ವರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಾಪ್ಲೆನ್ ಆಗಿ ಸೇವೆ ಸಲ್ಲಿಸಿದರು.


1974ರಿಂದ 1982ರ ವರೆಗೆ ಅದ್ಯಪಾಡಿ, 1982ರಿಂದ 1989ರ ವರೆಗೆ ಕೊಳಲಗಿರಿ, 1989ರಿಂದ 1990ರ ವರೆಗೆ ಅಗ್ರಾರ್, 1990ರಿಂದ 1997ರ ವರೆಗೆ ಕಾಟಿಪಳ್ಳ, 1997ರಿಂದ 2003ರ ವರೆಗೆ ಮೂಡುಬೆಳ್ಳೆ, 2003ರಿಂದ 2010ರ ವರೆಗೆ ಕುಂತಳನಗರ, 2010ರಿಂದ 2013ರ ವರೆಗೆ ಪಾಂಬೂರು ಹಾಗೂ 2015ರಿಂದ 2021ರ ವರೆಗೆ ತ್ರಾಸಿ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, 2013ರಿಂದ 2015ರ ವರೆಗೆ ಅತ್ತೂರಿನಲ್ಲಿ ಚಾಪ್ಲೆನ್ ಆಗಿದ್ದರು.


ನಿವೃತ್ತಿಯ ಬಳಿಕ 2021ರಿಂದ 2023ರ ವರೆಗೆ ಬಸ್ರೂರಿನಲ್ಲಿ ವಾಸವಾಗಿದ್ದ ಅವರು, 2023ರಿಂದ ಕಲ್ಯಾಣಪುರದ ವಿಶ್ರಾಂತ ಧರ್ಮಗುರುಗಳ ನಿವಾಸ ಮಿಲಾಗ್ರಿಸ್ ಹೋಮ್'ನಲ್ಲಿ ನೆಲೆಸಿದ್ದರು.


ವಂ.ಚಾರ್ಲ್ಸ್ ಲೂವಿಸ್ ಅವರ ನಿಧನಕ್ಕೆ ಉಡುಪಿ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ, ನಿವೃತ್ತ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಕುಲಪತಿ ವಂ.ಸ್ಟೀವನ್ ಡಿ'ಸೋಜಾ ಸಂತಾಪ ಸೂಚಿಸಿದ್ದಾರೆ.