ಇಂದಿನಿಂದ ವಂಚಕಿ ಚೈತ್ರ ವಿಚಾರಣೆ ಶುರು

ಲೋಕಬಂಧು ವಾರ್ತೆ
ಗುರುವಾರ, ಸೆಪ್ಟೆಂಬರ್ 14

ಇಂದಿನಿಂದ ವಂಚಕಿ ಚೈತ್ರ ವಿಚಾರಣೆ ಶುರು
ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರಳನ್ನು ಬಂಧಿಸಿದ್ದು, ಇಂದಿನಿಂದ ವಿಚಾರಣೆ ಆರಂಭವಾಗಲಿದೆ.

ಮಂಗಳವಾರ ಆಕೆಯನ್ನು ಬಂಧಿಸಿದ್ದು, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.

10 ದಿನಗಳ ಕಾಲ ಕಸ್ಟಡಿ ಪಡೆಯಲಾಗಿದ್ದು, ಸಿಸಿಬಿ ಎಸಿಪಿ ರೀನಾ ಸುವರ್ಣ ವಿಚಾರಣೆ ನಡೆಸಲಿದ್ದಾರೆ.

ಸಿಸಿಬಿ ಕಚೇರಿಗೆ ಆಗಮಿಸಿದ ಚೈತ್ರಾ, ಈ ಪ್ರಕರಣದಲ್ಲಿ ಸ್ವಾಮೀಜಿ ಕೂಡ ಇದ್ದಾರೆ. ಅವರ ಬಂಧನವಾದರೆ ಎಲ್ಲ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರೂ ಹೊರಬರುತ್ತದೆ ಎಂದಿದ್ದಾಳೆ.

ಬೈಂದೂರು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿ 5 ಕೋಟಿ ರೂ. ಪಡೆದು ವಂಚಿಸಿರುವ ಆರೋಪವನ್ನು ಚೈತ್ರಾ ಎದುರಿಸುತ್ತಿದ್ದು, ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.