ಲೋಕಬಂಧು ನ್ಯೂಸ್ ಉಡುಪಿ, ಆ.30
ಮಾರ್ಪಳ್ಳಿ ನಿವಾಸಿ ರಜನಿಕಾಂತ್ ತಂತ್ರಿ (45) ಅವರು ಅಸೌಖ್ಯದಿಂದ ಭಾನುವಾರ ನಿಧನರಾದರು.ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಕುಕ್ಕಿಕಟ್ಟೆ ಶಾಲಾ ನಿವೃತ್ತ ಶಿಕ್ಷಕರಾಗಿದ್ದ ದಿ. ಶ್ರೀಪತಿ ತಂತ್ರಿ ಮತ್ತ ಸುಬೋಧಿನಿ ಶಾಲಾ ನಿವೃತ್ತ ಶಿಕ್ಷಕಿ ಪ್ರಫುಲ್ಲ ದಂಪತಿ ಪುತ್ರ ರಜನಿಕಾಂತ್ ವೃತ್ತಿಯಲ್ಲಿ ಮೆಡಿಕಲ್ ರೆಪ್ ಆಗಿದ್ದರು. ಸಾಹಿತ್ಯಾಸಕ್ತಿ ಹೊಂದಿದ್ದ ಅವರ ಹಲವು ಕವನಗಳು ಮೆಚ್ಚುಗೆಗೆ ಪಾತ್ರವಾಗಿತ್ತು.
ಮೃತರಿಗೆ ಪತ್ನಿ, ತಾಯಿ ಮತ್ತು ಸಹೋದರ ಇದ್ದಾರೆ.