ವಂದೇ ಮಾತರಂ ಕಾಲ್ನಡಿಗೆ ಜಾಥಾಕ್ಕೆ ಸದಾನಂದನ್ ಮಾಸ್ತರ್

ಲೋಕಬಂಧು ‌ನ್ಯೂಸ್ | ಉಡುಪಿ, ಸೆ.2
ಸೆಪ್ಟೆಂಬರ್ 7ರಂದು ಕುಂದಾಪುರ ಬಸ್ ನಿಲ್ದಾಣದ ಬಳಿಯಿಂದ ಆರಂಭವಾಗುವ ವಂದೇ ಮಾತರಂ ಜನಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಕೇರಳದ ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಆಗಮಿಸಲಿದ್ದು, ಬೆಳಿಗ್ಗೆ 8.30ಕ್ಕೆ ತ್ರಿವರ್ಣ ಧ್ವಜ ಅರಳಿಸುವ ಮೂಲಕ ಚಾಲನೆ ಕೊಡಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬಳಿಕ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.