ಲೋಕಬಂಧು ನ್ಯೂಸ್ | ಮೂಡುಬಿದಿರೆ, ಏ.9
ಆಳ್ವಾಸ್ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆಗೈದು ಮತ್ತೊಮ್ಮೆ ತನ್ನ ಶೈಕ್ಷಣಿಕ ಮೇಲುಗೈ ಸಾಧಿಸಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನನ್ಯ ಕೆ. 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು.
ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್. 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ.
ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು 95 ಶೇ.ಕ್ಕಿಂತ ಹೆಚ್ಚು ಅಂಕ ಗಳಿಸಿದರೆ 1,557 ವಿದ್ಯಾರ್ಥಿಗಳು 90 ಶೇ.ಕ್ಕಿಂತ ಅಧಿಕ, 1,892 ವಿದ್ಯಾರ್ಥಿಗಳು 85 ಶೇ.ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕ ಗಳಿಸಿದ್ದಾರೆ. 285 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಲ್ಲವಿ ಕೆ. ಸಿ 597, ಅಂಕಿತಾ ಬಸಪ್ಪ ಕೊನ್ನೂರ 596, ದಿಶಾ ಎಚ್. ಶೆಟ್ಟಿ 596, ಜ್ಞಾನಶ್ರೀ ಡಿ. ಅರಳ 596 ,ಆದರ್ಶ ಬಾಲಚಂದ್ರ ಹೆಗಡೆ 596, ಲಿಜ್ವಿತಾ ವರ್ಜೀನಿಯಾ ಡಿ'ಮೆಲ್ಲೊ 596, ನೇಹಾ ಪಿ. ಕಕರಡ್ಡಿ 596, ಐಶ್ವರ್ಯ 595, ಮಾನ್ವಿ ಡಿ. ಎಸ್. 595, ನಿರಾಳಿ ಹೆಗ್ಗರ್ 595, ಜಶ್ ಕಾವೇರಿಯಪ್ಪ ಎ. ಎಂ. 595, ವೈಷ್ಣವಿ ರಾವ್ 595, ಅಕ್ಷಯ ಕುಮಾರ್ ಸೋಮಶೇಖರ ಗುಗ್ಗಾರಿ 595 ಅಂಕ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.
ಗಣಿತ ವಿಷಯದಲ್ಲಿ 199, ಸಂಸ್ಕೃತ 122, ಬಿಸಿನೆಸ್ ಸ್ಟಡೀಸ್ 86, ಕಂಪ್ಯೂಟರ್ ಸೈನ್ಸ್ 86, ಭೌತಶಾಸ್ತ್ರ 85, ಕನ್ನಡ-ಲ 82, ಬೇಸಿಕ್ ಮ್ಯಾಥ್ಸ್ 54, ಅಕೌಂಟೆನ್ಸಿ 53, ಜೀವಶಾಸ್ತ್ರ 49, ಸಂಖ್ಯಾಶಾಸ್ತ್ರ 45, ಅರ್ಥಶಾಸ್ತ್ರ 36, ರಸಾಯನಶಾಸ್ತ್ರ 21, ಹಿಂದಿ 13, ಎಲೆಕ್ಟ್ರಾನಿಕ್ಸ್ 6, ಇಂಗ್ಲಿಷ್ 3, ಸಮಾಜಶಾಸ್ತ್ರ 2, ರಾಜ್ಯಶಾಸ್ತ್ರ 1, ಅರೇಬಿಕ್ 1 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.
6 ವಿಷಯಗಳಲ್ಲಿ 100ಕ್ಕೆ 100 ಅಂಕ ಓರ್ವ ವಿದ್ಯಾರ್ಥಿ, 5 ವಿಷಯಗಳಲ್ಲಿ 4, 4 ವಿಷಯಗಳಲ್ಲಿ 20, 3 ವಿಷಯಗಳಲ್ಲಿ 66, 2 ವಿಷಯದಲ್ಲಿ 147, ಒಂದು ವಿಷಯದಲ್ಲಿ 481 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ನಿಖಾಯದ ವೇಣುಗೋಪಾಲ ಶೆಟ್ಟಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
.jpg)