ಲೋಕಬಂಧು ನ್ಯೂಸ್ | ಉಡುಪಿ, ಏ.6
ಅಷ್ಟಬಂಧ ಸಹಿತ ಪುನಃಪ್ರತಿಷ್ಠಾಪನೆಗೊಂಡು ಬ್ರಹ್ಮಕುಂಭಾಭಿಷೇಕ ಸಂಭ್ರಮದಿಂದ ಸಂಪನ್ನಗೊಂಡ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವಳದಲ್ಲಿ ಭಾನುವಾರ ರಾತ್ರಿ ಮಹಾರಂಗಪೂಜೆ ವೈಭವದಿಂದ ನಡೆಯಿತು.
ಅನೇಕ ಮಂದಿ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.
ಇಂದ್ರಾಣಿ ಶ್ರೀಮುಖ್ಯಪ್ರಾಣ ಮತ್ತು ಶ್ರೀನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಳ ಆಡಳಿತ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಸಮಿತಿ ಸದಸ್ಯರು ಮೊದಲಾದವರಿದ್ದರು.
