ಭೀಮ ಯಕ್ಷಶಿಕ್ಷಣ ಸನಿವಾಸ ಶಿಬಿರ ಸಂಪನ್ನ

ಲೋಕಬಂಧು ನ್ಯೂಸ್ ಉಡುಪಿ, ಏ.19
ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಒಂದು ವಾರದ ಭೀಮ ಯಕ್ಷಶಿಕ್ಷಣ ಸನಿವಾಸ ಶಿಬಿರದ ಸಮಾರೋಪ ಈಚೆಗೆ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಯಕ್ಷಗಾನ ಕಲಾರಂಗದ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ಸಮಾಜಕ್ಕೊಂದು ಸಂದೇಶವಿರುತ್ತದೆ. ಶಿಬಿರಾರ್ಥಿಗಳು ಆಡಿದ ಮಾತಿನಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು ಎಂಬುದು ಸ್ಪಷ್ಟವಾಯಿತು. ಸಮರ್ಪಣಾಭಾವದ ಕೆಲಸಗಳಿಂದಲೇ ಕಲಾರಂಗ ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದೆ ಎಂದರು.


ಶಿಬಿರದ ನಿರ್ದೇಶಕ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು ಗೌರವಿಸಲಾಯಿತು.


ಬಳಿಕ ಮಾತನಾಡಿದ ಸಂಜೀವ ಸುವರ್ಣ, ಕಲಾವಿದರು ಅಪಸವ್ಯಗಳನ್ನು ಪ್ರದರ್ಶಿಸಿದಾಗ ಯಾಕೆ ಹೀಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.


 ಸದಭಿರುಚಿಯ ಯಕ್ಷಪ್ರೇಕ್ಷಕರ ನಿರ್ಮಾಣ ಯಕ್ಷಶಿಕ್ಷಣದಿಂದ ಸಾಧ್ಯ. ಕಳೆದ 18 ವರ್ಷಗಳಿಂದ ನಿರಂತರವಾಗಿ ಈ ಅಭಿಯಾನ ಮುನ್ನಡೆಯುತ್ತಿರುವುದು ಕಾರ್ಯಕರ್ತರ ಬದ್ಧತೆಯ ಸಂಕೇತ ಎಂಬುದಾಗಿ ಪಣಂಬೂರು ವಾಸದೇವ ಐತಾಳ ಹೇಳಿದರು.


ಅಭ್ಯಾಗತರಾಗಿ ಭೀಮ ಗೋಲ್ಡ್ ಸಂಸ್ಥೆ ಪ್ರತಿನಿಧಿ ಪೆರಂಪಳ್ಳಿ ರಾಘವೇಂದ್ರ ಭಟ್, ಡಾ.ಸಂದೀಪ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಶ್ರೀನಿವಾಸ ರಾವ್ ಹಿರಿಯಡಕ ಭಾಗವಹಿಸಿದ್ದರು.


ಶಿಬಿರದ ಶಿಕ್ಷಕರಾದ ನರಸಿಂಹ ತುಂಗ, ಆದ್ಯತಾ ಭಟ್, ಶ್ರೀಧರ ಹೆಗಡೆ, ಮಹೇಶ್ ಮಂದಾರ್ತಿ, ಶಿಶಿರ್, ಮನೋಜ್, ಕಾರ್ತಿಕ್ ಭಟ್, ಶ್ರುತಿ ಬಂಗೇರ, ಪಲ್ಲವಿ ಕೊಡಗು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪವನ್ ಕಿರಣ್ಕೆರೆ, ಮಿಥುನ್ ನಾಯಕ್ ಅವರನ್ನು ಗೌರವಿಸಲಾಯಿತು.


ಸಂಸ್ಥೆ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ವೇದಿಕೆಯಲ್ಲಿದ್ದರು.


ಯಕ್ಷಗಾನ ಕಲಾರಂಗದ ಅಧ್ಯಕ್ಷತೆ ಅಧ್ಯಕ್ಷತೆ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಶಿಬಿರ ಸಂಯೋಜಕ ನಿರಂಜನ ಭಟ್ ಎಂ., ಸಂಸ್ಥೆ ಕಾರ್ಯಕರ್ತರಾದ ವಿದ್ಯಾ ಪ್ರಸಾದ್, ಅಶೋಕ ಎಂ, ಎ. ನಟರಾಜ ಉಪಾಧ್ಯಾಯ, ಅನಂತರಾಜ ಉಪಾಧ್ಯ, ಡಾ. ಪ್ರತಿಮಾ ಆಚಾರ್ಯ, ಎ.ಅಜಿತ್ ಕುಮಾರ್, ಸುದರ್ಶನ ಬಾಯರಿ, ವಿಶ್ವನಾಥ ಸಹಕರಿಸಿದರು.


ಸಭಾ ಕಾರ್ಯಕ್ರಮದ ಮೊದಲು ಶಿಬಿರದಲ್ಲಿ ಪಾಲ್ಗೊಂಡ 103 ವಿದ್ಯಾಥರ್ಿಗೊಓಒಈಇಈಈಳು ತರಬೇತಿಯಲ್ಲಿ ತಾವು ಕಲಿತ ಹೆಜ್ಜೆ, ತಾಳ, ಅಭಿನಯಗಳ ತುಣುಕುಗಳನ್ನು ಪ್ರಸ್ತುತಪಡಿಸಿದರು.