ಲೋಕಬಂಧು ನ್ಯೂಸ್ ಉಡುಪಿ, ಏ.9
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ತನ್ನ ಅಗ್ರಸ್ಥಾನವನ್ನು ಬಿಟ್ಟುಕೊಡದೇ ಶೇ. 96.39ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಲಭಿಸಿರುವುದು ಶ್ಲಾಘನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕತೆಯಲ್ಲಿ ಮುಂದಿರುವ ಉಡುಪಿ ಜಿಲ್ಲೆ, ಶೈಕ್ಷಣಿಕ ವಿಭಾಗದಲ್ಲೂ ಅಗ್ರಸ್ಥಾನ ಕಾಪಾಡುತ್ತಾ ಬಂದಿದೆ.
ಓದಿಗಾಗಿ ಅಮೂಲ್ಯ ಸಮಯ ಮೀಸಲಿಟ್ಟು ಅತ್ಯದ್ಭುತ ಸಾಧನೆ ಮಾಡಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅವರ ಮುಂದಿನ ಶೈಕ್ಷಣಿಕ ಜೀವನವು ಉತ್ತಮ ಯಶಸ್ಸು ಕಾಣಲಿ ಹಾಗೂ ಅವರನ್ನು ಪ್ರೋತ್ಸಾಹಿಸಿದ ಪೋಷಕರು ಹಾಗೂ ಉತ್ತಮ ಶಿಕ್ಷಣ ಕಲ್ಪಿಸಿದ ಶಿಕ್ಷಣ ಇಲಾಖೆಯ ಎಲ್ಲಾ ವರ್ಗದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ರಮೇಶ್ ಕಾಂಚನ್ ತಿಳಿಸಿದ್ದಾರೆ.