ಕೆರೆಮನೆ ಶಿವಾನಂದ ಹೆಗಡೆಗೆ ಪ್ರಶಸ್ತಿ ಪ್ರದಾನ

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.11
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2024ನೇ ಸಾಲಿನ ಪುಸ್ತಕ ಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವಾನಂದ ಹೆಗಡೆ ಗುಣವಂತೆ ಅವರಿಗೆ‌ ಗುರುವಾರ ಯಕ್ಷಗಾನ ಅಕಾಡೆಮಿ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಳೆದ ಮೇ 3ರಂದು ಉಡುಪಿಯಲ್ಲಿ ನಡೆದ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರಲಿಲ್ಲ.


ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ರಿಜಿಸ್ಟ್ರಾರ್ ನಮ್ರತ ಎನ್. ಹಾಗೂ ಸದಸ್ಯರಾದ ರಾಘವ ಎಚ್., ಕೊಪ್ಪಲ ಮೋಹನ ಕದ್ರಿ, ಪೃಥ್ವಿ ರಾಜೇಶ್ ಕುಮಾರ್, ಪುಟ್ಟಸ್ವಾಮಿ ಎ.ಆರ್., ವಿದ್ಯಾಧರ ವೆಂಕಟೇಶ್ ಜಲವಳ್ಳಿ ಮೊದಲಾದವರಿದ್ದರು.


ಅಕಾಡೆಮಿ ಸದಸ್ಯ ರಾಘವ ಎಚ್. ನಿರೂಪಿಸಿದರು.