ಲೋಕಬಂಧು ನ್ಯೂಸ್ ನವದೆಹಲಿ, ಜೂ. 7
ಪೆಟ್ರೋಲ್, ಡೀಸೆಲ್ ಹಾಗೂ ಎನ್‌ಜಿ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿರುವ ಬೆನ್ನಲ್ಲೇ ಇದೀಗ ಮತ್ತೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 29 ರೂ. ಏರಿಕೆಯಾಗಿದೆ.ಆ ಮೂಲಕ 913 ರೂ. ಇದ್ದ ಪ್ರತೀ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ಈಗ ಬರೋಬ್ಬರಿ 942 ರೂ.ಗೆ ಏರಿದೆ.
ಪರಿಷ್ಕೃತ ದರ ಜೂ.7ರಿಂದಲೇ ಏರಿಕೆಯಾಗಿದ್ದು, ಜನರಿಗೆ ತೀವ್ರ ಆರ್ಥಿಕ ಹೊರೆ ಬಿದ್ದಿದೆ. ಕಳೆದ ಮೂರು ತಿಂಗಳಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇದು 2ನೇ ಬಾರಿಯ ಬೆಲೆ ಏರಿಕೆಯಾಗಿದ್ದು ಕಳೆದ ಮಾ.7ರಂದು 60 ರೂ. ಏರಿಕೆಯಾಗಿತ್ತು.