ಪುರುಷೋತ್ತಮ ಮಾಸ: ವಿಶೇಷ ಹೂವಿನ ಪೂಜೆ

ಲೋಕಬಂಧು ನ್ಯೂಸ್ | ಮೂಡುಬಿದಿರೆ, ಜೂ.10
ಇಲ್ಲಿಗೆ ಸಮೀಪದ ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ಅಧಿಕ ಜ್ಯೇಷ್ಠ ಪುರುಷೋತ್ತಮ ಮಾಸ ಆಚರಣೆ ಪ್ರಯುಕ್ತ  ಜೂನ್ 7ರಂದು ಸೀತಾಪತಿ ಶ್ರೀರಾಮಚಂದ್ರ ದೇವರಿಗೆ ವಿಶೇಷ ಹೂವಿನ ಪೂಜೆ ನೆರವೇರಿತು.
ಭಜಕ ವೃಂದದಿಂದ ನೀಡಲಾದ ಸುಮಾರು ನಲವತ್ತು ಅಟ್ಟೆ ಮಲ್ಲಿಗೆಯ ಅಲಂಕಾರ ಆಕರ್ಷಣೀಯವಾಗಿತ್ತು.


ಕಾರ್ಕಳದ ಜಿ.ಎಸ್.ಬಿ. ಬಾಲಕರ ಭಜನ್ ಸಂಧ್ಯಾ, ಮಂಗಳೂರಿನ ಮೇಘಾ ಪೈ ಬಳಗದ ಭಜನ ಸಂಗಮ, ಕೊಂಚಾಡಿ ಮುರಳೀಧರ ಕಾಮತ್ ಬಳಗದ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.


ಅರ್ಚಕರಾದ ಪದ್ಮನಾಭ ಭಟ್ ಹಾಗೂ ಸುದೇಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.


ಜಿ.ಎಸ್.ಬಿ. ಸಮಾಜದ ಅಧ್ಯಕ್ಷ ಕೆ.ವಿಶ್ವನಾಥ ಮಾಧವ ಪ್ರಭು, ಹಿರಿಯರಾದ ಎಂ. ದಯಾನಂದ ಪೈ ಪಡುಮಾರ್ನಾಡು ಸಹಿತ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.