ಲೋಕಬಂಧು ನ್ಯೂಸ್ | ಉಡುಪಿ, ಜೂ.11
ಜಿಲ್ಲಾಡಳಿತದ ಪರವಾನಿಗೆ ರಹಿತವಾಗಿ ಖಾಸಗಿ ಬಸ್ ದರ ಏರಿಕೆ ಮಾಡಿರುವ ಖಾಸಗಿ ಬಸ್ ಮಾಲಕರ ಸಂಘದ ಕ್ರಮವನ್ನು ಖಂಡಿಸಿ ಗುರುವಾರ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಚಂದ್ರಶೇಖರ್ ವಿ., ಎಚ್.ನರಸಿಂಹ ಮತ್ತು ರಾಜು ಪಡುಕೋಣೆ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಭಾಕರ ಕುಂದರ್, ಉಮೇಶ್ ಕುಂದರ್, ಸುಭಾಸ್ ನಾಯಕ್ ಮತ್ತು ಬಲ್ಕೀಸ್, ಸಿಪಿಐಎಂ ಪಕ್ಷದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ್ ಗೊಲ್ಲ, ಸದಸ್ಯರಾದ ಮಹಾಬಲ ವಡೇರಹೋಬಳಿ, ನಳಿನಿ, ಶೀಲಾವತಿ, ಚಿಕ್ಕ ಮೊಗವೀರ ಮೊದಲಾದವರಿದ್ದರು.
ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಎಡಿಸಿ ಅಬೀದ್ ಗದ್ಯಾಳ್ ಮನವಿ ಸ್ವೀಕರಿಸಿದರು.
.jpg)
.jpg)