ಸುಧಾಕರ ಶ್ರೀಯಾನ್ ನಿಧನ

ಲೋಕಬಂಧು ನ್ಯೂಸ್ | ಉಡುಪಿ, ಜೂ.11
ಗುಂಡಿಬೈಲು ನಿವಾಸಿ ಸುಧಾಕರ ಶ್ರೀಯಾನ್ (67) ಅಲ್ಪಕಾಲದ ಅಸೌಖ್ಯದಿಂದ ಜೂ.10ರಂದು ಸ್ವಗೃಹದಲ್ಲಿ ನಿಧನರಾದರು.
20 ವರ್ಷ ಕಾಲ ರಿಕ್ಷಾ ಮಾಲಕರಾಗಿದ್ದ ಅವರು, ಉಡುಪಿ ರಥಬೀದಿ ಅಟೋ ಚಾಲಕ-ಮಾಲಕರ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು.


ಮೃತರು ಪತ್ನಿ,ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.