ಲೋಕಬಂಧು ನ್ಯೂಸ್ ಉಡುಪಿ, ಜು.31
ಪರ್ಯಾಯ ಶೀರೂರು ಮಠ ನೇತೃತ್ವದಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ- ವಿಟ್ಲಪಿಂಡಿ ಮಹೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆ.1ರಂದು ಮಧ್ವಮಂಟದಲ್ಲಿ ಅಪರಾಹ್ನ 2.30ರಿಂದ ಸಂಗೀತ ಸ್ಪರ್ಧೆ, ಆ.2ರಂದು ಮಧ್ವಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆ, ಆ.8ರಂದು ಚುಕ್ಕೆ ರಂಗವಲ್ಲಿ ಸ್ಪರ್ಧೆ, ಆ.9ರಂದು ಸಾಂಪ್ರದಾಯಿಕ ಕ್ರೀಡೆ, ಆ.15ರಂದು ಪ್ರಬಂಧ ಸ್ಪರ್ಧೆ-ಮಧ್ವರಿಗೆ ಒಲಿದ ಕೃಷ್ಣ, ಆ.16ರಂದು ವೇಷ ರಹಿತ ಸಾಂಪ್ರದಾಯಿಕ ಹುಲಿ ವೇಷ ಕುಣಿತ ಸ್ಪರ್ಧೆ, 22ರಂದು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ- ವಿಷಯ: ಆಚಾರ್ಯ ಮಧ್ವ, ಆ.23ರಂದು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ, 23ರಂದು ಮೊಸರು ಕಡೆಯುವ ಸ್ಪರ್ಧೆ, ಶಂಖ ಊದುವ ಸ್ಪರ್ಧೆ, ಮಠದ ಸಿಬಂದಿಯವರಿಗೆ ಕಬಡ್ಡಿ ಸ್ಪರ್ಧೆ ನಡೆಯಲಿದೆ.
ಆ.29ರಂದು ಹೂ ಕಟ್ಟುವ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, 30ರಂದು ಮಡಕೆಗೆ ಚಿತ್ತಾರ ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ.
ಸೆ.4ರಂದು ಮುದ್ದು ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿದ್ದು ಮುದ್ದುಕೃಷ್ಣ, ರಾಧಾ-ಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆ, ಹುಲಿ ವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು, ಸೆ.6ರಂದು ಬಹುಮಾನ ವಿತರಣೆ ನಡೆಯಲಿದೆ.
ಸ್ಪರ್ಧೆಯ ನಿಯಮ, ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0820-2520598 ಅಥವಾ 97412 57830ನ್ನು ಸಂಪರ್ಕಿಸುವಂತೆ ಮಠದ ಪ್ರಕಟಣೆ ತಿಳಿಸಿದೆ.

