ಲೋಕಬಂಧು ನ್ಯೂಸ್ | ಕೋಟ, ಜು.28
ಕೇರಳಕ್ಕೆ ಸಾಗಿಸುತ್ತಿದ್ದ ಸುಮಾರು 160 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಮಣೂರು ಎಂಬಲ್ಲಿ ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಾಡಮಸ್ಕಿರಿ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಕ ನಾಗರಾಜ ನಾಯ್ಕ ಎಂಬಾತ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಲಾರಿ (ಕೆಎ47-5533)ಯಲ್ಲಿ ಕಾಸರಗೋಡಿಗೆ ಸಾಗಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ ಕುಮಾರ್ ಎಂಬವರು ಮಣೂರು ಮಹಾಲಕ್ಷ್ಮೀ ಹೋಟೆಲ್ ಎದುರು ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು.
ಕಾಸರಗೋಡು ಶಾಜಿ ಟ್ರೇಡಿಂಗ್ ಕಂಪೆನಿಗೆ ಮಾರಾಟ ಮಾಡಲು 320 ಪ್ಲಾಸ್ಟಿಕ್ ಬಿಳಿ ಪಾಲಿತಿನ್ ಚೀಲದಲ್ಲಿ ಸುಮಾರು 160 ಕ್ವಿಂಟಾಲ್ ಉಚಿತ ಅಕ್ಕಿ ಲೋಡ್ ಮಾಡಿರುವುದಾಗಿ ಲಾರಿ ಮಾಲಕ ಗಿರೀಶ್ ನಾಯ್ಕ್ ತಿಳಿಸಿರುವುದಾಗಿ ಚಾಲಕ ಕೆ.ನರಸಿಂಹ ಮಾಹಿತಿ ನೀಡಿದರು.
3 ಲಕ್ಷ 84 ಸಾವಿರ ರೂ. ಮೌಲ್ಯದ ಅಕ್ಕಿ ಹಾಗೂ ಸುಮಾರು 3.50 ಲಕ್ಷ ರೂ. ಮೌಲ್ಯದ ವಾಹನ ಸೇರಿದಂತೆ ಒಟ್ಟು 7.34 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಕೋಟ ಠಾಣೆಯಲ್ಲಿ ಕೇಸು ದಾಖಲಾಗಿದೆ.
