ಲೋಕಬಂಧು ನ್ಯೂಸ್ ಉಜಿರೆ, ಜೂ.15
ಇಲ್ಲಿನ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನೋವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ನಮ್ರತಾ ಆರ್., ಗೀತುದಾಸ್ ಡಿ. ಮತ್ತು ಸಂಜನಾ ಆರ್. ಇಂಡೋನೇಷ್ಯಾದಲ್ಲಿ ಜುಲೈ 13ರಿಂದ 17ರ ವರೆಗೆ ನಡೆಯುತ್ತಿರುವ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.
ಅವರಿಗೆ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ.ಸೌಮ್ಯ ಬಿ.ಪಿ. ಮತ್ತು ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಶುಭ ಹಾರೈಸಿ, ಅಭಿನಂದಿಸಿದ್ದಾರೆ.