ಲೋಕಬಂಧು ನ್ಯೂಸ್ | ಉಡುಪಿ, ಜು.31
ಶಾಸಕ ಯಶ್‌ಪಾಲ್ ಸುವರ್ಣ ಅವರನ್ನು ರಾಜಕೀಯವಾಗಿ ಎದುರಿಸಲಾಗದ ಕಾಂಗ್ರೆಸ್ ಪಕ್ಷದ ಕೆಲವು ಪುಡಿ ಪುಡಾರಿಗಳ ಒತ್ತಡಕ್ಕೆ ಮಣಿದು ಪೊಲೀಸರು ಯಶಪಾಲ್ ಸುವರ್ಣ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಪ್ರತಿಭಟನೆ ವೇಳೆ ಯಶಪಾಲ್ ಸುವರ್ಣ ಅವರು ಆಡಿದ ನೈಜ ಮಾತುಗಳನ್ನು ಕಾಂಗ್ರೆಸ್ ರಾಜಕೀಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ಪೊಲೀಸರನ್ನು ಬಳಸಿ ದಬ್ಬಾಳಿಕೆ ಮಾಡುವುದನ್ನು ಸಹಿಸಲಾಗದು.
ಶಾಸಕ ಯಶಪಾಲ್ ಸುವರ್ಣ ಅವರನ್ನು ಗುರಿಯಾಗಿಸಿ ರಾಜಕೀಯವಾಗಿ ಎದುರಿಸುವ ಧೈರ್ಯವಿಲ್ಲದೆ ಪೊಲೀಸ್ ಇಲಾಖೆಯನ್ನು ಮುಂದಿಟ್ಟು ಪ್ರಕರಣ ದಾಖಲಿಸಿ, ದಬ್ಬಾಳಿಕೆ ನಡೆಸಿ ಬೆದರಿಸಿ ಮಣಿಸುವ ಷಡ್ಯಂತ್ರಕ್ಕೆ ಬಿಜೆಪಿ ಎಂದಿಗೂ ಬಗ್ಗುವುದಿಲ್ಲ.
ಕಾಂಗ್ರೆಸ್‌ನ ಇಂಥ ಮನಸ್ಥಿತಿಗೆ ಧಿಕ್ಕಾರ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
