ಕಾಂಗ್ರೆಸ್‌ಗೆ ಈಗ ಉಕ್ಕುತ್ತಿರುವ ರಾಮಭಕ್ತಿ: ಕೋಟ ವ್ಯಂಗ್ಯ

ಲೋಕಬಂಧು ನ್ಯೂಸ್ | ಉಡುಪಿ, ಜು.6
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಹಿತ ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವಾಗ ಇಲ್ಲದ ರಾಮಭಕ್ತಿ ಇದೀಗ ದಿಢೀರ್ ಉಕ್ಕುತ್ತಿರುವುದು ಸಮಾಧಾನ ತಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನೇ ಇಲ್ಲ ಎಂದು ಇತಿಹಾಸದುದ್ದಕ್ಕೂ ಸಾರಿದ ಕಾಂಗ್ರೆಸ್ ಪಕ್ಷ, ಈಗ ರಾಮ ಭಜನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ಹಿಂದೂಗಳ ಶ್ರದ್ಧಾಕೇಂದ್ರಗಳಾದ ಜ್ಞಾನವಾಪಿ, ಮಥುರಾದಂಥ ದೇವಸ್ಥಾನಗಳೂ ಹಿಂದೂಗಳ ಕೈಸೇರುವಲ್ಲಿ ನಿಮ್ಮೆಲ್ಲರ ಬೆಂಬಲ ನಮ್ಮ ಜೊತಗಿರಲಿ ಎಂದು ಅಪೇಕ್ಷಿಸುವುದಾಗಿ ತಿಳಿಸಿದರು.


ಆದಿತ್ಯನಾಥ ಯೋಗಿಯಂಥ ಯೋಗಿಯವರೇ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಶ್ರೀರಾಮ ಮಂದಿರಕ್ಕೆ ಕನ್ನ ಹಾಕಿದ ದುಷ್ಟರನ್ನು ಶಿಕ್ಷಿಸದೇ ಬಿಡಲಾರರು. ಆ ಬಗ್ಗೆ ದೇಶದ ಜನತೆಗೂ ವಿಶ್ವಾಸವಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.