ಲೋಕಬಂಧು ನ್ಯೂಸ್ | ಉಡುಪಿ, ಜು.6
ಉಡುಪಿ ಜಿಲ್ಲಾ ದೇವಾಡಿಗ ಮಹಾಮಂಡಲ ವತಿಯಿಂದ ಡಿಸೆಂಬರ್ 12ರಂದು ಚಿಟ್ಪಾಡಿಯ ಬಯಲು ರಂಗ ಮಂದಿರದಲ್ಲಿ ವಿಶ್ವ ದೇವಾಡಿಗ ಮಹಾಧಿವೇಶನ ಆಯೋಜಿಸಲಾಗಿದೆ ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇವಾಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯ, ದೇಶಗಳಿಂದ ಸುಮಾರು 20ರಿಂದ 25 ಸಾವಿರಕ್ಕೂ ಅಧಿಕ ಮಂದಿ ದೇವಾಡಿಗ ಸಮಾಜದವರು ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಹಿರಿಯಡ್ಕ ಮೋಹನದಾಸ, ಗಣೇಶ ದೇವಾಡಿಗ, ಜನಾರ್ದನ ಪಡುಪಣಂಬೂರು, ಯಾದವ ದೇವಾಡಿಗ, ಸುರೇಶ್ ದೇವಾಡಿಗ, ರವಿ ಎಸ್. ದೇವಾಡಿಗ, ಚೆನ್ನಪ್ಪ ಮೊಯಿಲಿ ಇದ್ದರು.