ಲೋಕಬಂಧು ನ್ಯೂಸ್ | ಮಣಿಪಾಲ, ಜು.6
ಪರ್ಕಳ ಪೇಟೆಯ ಕೆ.ಎಚ್. ಹಾರ್ಡ್ ವೇರ್ ಬಳಿ ವಾರಾಹಿ ಕುಡಿಯುವ ನೀರಿನ ಯೋಜನೆಯ ಪೈಪುಗಳನ್ನು ಸೂಕ್ತವಾಗಿ ಅಳವಡಿಸದೆ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿರಿಸಿದ್ದು, ಅದರಿಂದಾಗಿ ಮಳೆ ನೀರು ಹರಿದು ಹೋಗಲು ತೊಂದರೆಯಾಗುತ್ತಿದೆ. ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಅಪೂರ್ಣಗೊಂಡ ಪರ್ಕಳ ಪೇಟೆ ಚರಂಡಿ ವ್ಯವಸ್ಥೆ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ಬಾಕಿ ಉಳಿಸಿದ ಪರಿಣಾಮ ಈ ಬೃಹದಾಕಾರದ ಪೈಪುಗಳು, ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು. ಬಾಟಲಿಗಳು ಯಥೇಚ್ಛವಾಗಿ ಕಂಡುಬರುತ್ತಿವೆ.
ನಗರಸಭೆ ಇದುವರೆಗೆ ಆ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗುತ್ತಿದೆ.
ಅಪೂರ್ಣಗೊಂಡ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ಜೊತೆಗೆ ಇಂಟರ್ ಲಾಕ್, ಜಲ್ಲಿ ಇತ್ಯಾದಿಗಳನ್ನು ಕೂಡಲೇ ತೆರೆವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
.jpg)
.jpg)