ಲೋಕಬಂಧು ನ್ಯೂಸ್ | ಹಿರಿಯಡಕ, ಜು.6
ಉಡುಪಿ ಜಿಲ್ಲಾ ಕಾರಾಗೃಹದಲ್ಲಿನ ಬಂಧಿಗಳು ಹಾಗೂ ಸಿಬ್ಬಂದಿಗಳಿಗೆ ಲಯನ್ಸ್ ಕ್ಲಬ್ ಹಿರಿಯಡಕ ಮತ್ತು ಮಣಿಪಾಲ ದಂತ ವೈದ್ಯಕೀಯ ವಿಭಾಗ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರ ಆಯೋಜಿಸಲಾಯಿತು.
ಲಯನ್ಸ್ ಹಿರಿಯಡಕ ಅಧ್ಯಕ್ಷ ಜಯರಾಮ್ ಶೆಟ್ಟಿ, ಕೆ.ಎಮ್.ಸಿ ಸಮುದಾಯ ದಂತ ವೈದ್ಯಕೀಯ ವಿಭಾಗದ ಡಾ.ಕಲ್ಯಾಣ್ ಚಕ್ರವರ್ತಿ ಇದ್ದರು.
ಡಾ.ಸಹನಾ ನೇತೃತ್ವದ ವೈದ್ಯಕೀಯ ತಂಡದ ಸಹಯೋಗದೊಂದಿಗೆ ದಂತ ತಪಾಸಣೆ ನಡೆಸಲಾಯಿತು.
.jpg)
.jpg)